ಮಾಮರದಿ ಕೋಗಿಲೆ ಹಾಡಲು
ಮೊಗ್ಗೊಂದು ಹೂವಾಗಿ ಅರಳಲು
ಬಂತು ವಸಂತ , ಬಂತು ವಸಂತ ।।ಪ ।।
ತಂಗಾಳಿ ಮೆಲ್ಲನೆ ಸುಳಿದಾಡಲು
ಭಲಿತ ಫಲಗಳು ವೃಕ್ಷವ ತುಂಬಿರಲು
ಪಕ್ಷಿ ಮೃಗಗಳು ಆನಂದದಿ ಮೈಮರೆಯುಲಿರಲು
ಬಂತು ವಸಂತ , ಬಂತು ವಸಂತ ।।೧ ।।
ಝರಿಯೊಂದು ತೆವಳುತ್ತ ಸಾಗುತ್ತಿರಲು
ಕಾರ್ಮೋಡ ಕರಗಿ ಬಾನು ಶುಭ್ರವಾಗಲು
ಉದುರಿದೆಲೆ ಚಿಗುರಿಮರ ಕಂಗೊಳಿಸುತಿರಲು
ಬಂತು ವಸಂತ , ಬಂತು ವಸಂತ ।೨ ।।
ಸಸ್ಯ ಕೋಟಿ ಜಗಕೆ ತಂಪಾ ನೀಯುತಿರಲು
ಫಲ ಪುಷ್ಪಾ ಜಗದ ಹೃದಯ ತುಂಬಿರಲು
ಪ್ರಕೃತಿಯು ಜಗಕೆ ಹಸಿರ ಹಾಸಿರಲು
ಬಂತು ವಸಂತ , ಬಂತು ವಸಂತ ।।೩ ।।
----೦೩/೦೮/೨೦೧೩
------ಕಬ್ಬನ್ ಪಾರ್ಕ್
ವಸಂತ ಗೀತೆ |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ